ಮೊಳಕಾಲ್ಮುರು ಪಟ್ಟಣದ ಐದು ಕಡೆ ಸೇರಿದಂತೆ ತಾಲೂಕಿನ ಏಳು ಗ್ರಾಮಗಳಲ್ಲಿ ಭಾನುವಾರ ಪೀರಲ ದೇವರುಗಳನ್ನು ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಮಾಡುವುದರ ಮೂಲಕ ಮೊಹರಾಂ ಹಬ್ಬಕ್ಕೆ ತೆರೆ ಎಳೆಯಲಾಯಿತು. ಕಳೆದ ಐದು ದಿನಗಳ ಹಿಂದೆ ಪೀರಲ ದೇವರುಗಳನ್ನು ದೇವಸ್ಥಾನದಲ್ಲಿ ಕುಳ್ಳಿರಿಸಿ ಸಣ್ಣ ಸರಗಸ್ತಿ, ದೊಡ್ಡಸರಗಸ್ತಿಗಳನ್ನು ನಡೆಸಿ ದೇವಸ್ಥಾನ ಮುಂಭಾಗದಲ್ಲಿ ನಿರ್ಮಿಸಿದ್ದ ಕುಣಿಯಲ್ಲಿ ಭಕ್ತರು ಶನಿವಾರ ರಾತ್ರಿ ದೇವರನ್ನು ಹೊತ್ತು ಬೆಂಕಿ ತುಳಿದು ಬಾನುವಾರ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವರುಗಳನ್ನು ಮೆರವಣಿಗೆ ನಡೆಸಿದ ನಂತರ ಮೊಹರಾಂ ಹಬ್ಬಕ್ಕೆ ತೆರೆ ಬಿದ್ದಿದೆ.