ಮಳವಳ್ಳಿ: ಬೆಳಕವಾಡಿ ಬಳಿ ಬೈಕ್ ಕಾರಿನ ನಡುವೆ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು, ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಮಳವಳ್ಳಿ : ರಸ್ತೆ ಕ್ರಾಸ್ ಮಾಡು ತ್ತಿದ್ದ ಕಾರು ಹಾಗೂ ವೇಗವಾಗಿ ಬರುತ್ತಿದ್ದ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಗ್ರಾಮದ ಬಳಿ ಜರುಗಿದೆ. ಶುಕ್ರವಾರ ಬೆಳಿಗ್ಗೆ 10 30 ರ ಸಮಯ ದಲ್ಲಿ ಈ ಗ್ರಾಮದ ಹೊರವಲಯದ ಬೆಳಕವಾಡಿ ಪೂರಿಗಾಲಿ ರಸ್ತೆಯಲ್ಲಿ ಪೂರಿಗಾಲಿ ಕಡೆಯಿಂದ ಬರುತ್ತಿದ್ದ ಕಾರು ರಸ್ತೆ ಕ್ರಾಸ್ ಮಾಡುವ ಯತ್ನದಲ್ಲಿದ್ದಾಗ ಬೆಳಕವಾಡಿ ಕಡೆಯಿಂದ ಹೋಗು ತ್ತಿದ್ದ ಬೈಕ್ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿದ್ದು ಅಪಘಾತದ ಭೀಕರ ದೃಶ್ಯ ರಸ್ತೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.