ಬೆಂಗಳೂರು ಉತ್ತರ: ಜಿಬಿಎ ಕಚೇರಿ ಮುಂಭಾಗ ದೀಪಾವಳಿ ಹಬ್ಬದ ಪ್ರಯುಕ್ತ ಪೌರಕಾರ್ಮಿಕರಿಗೆ ಸಿಹಿ ತಿನಿಸು ವಿತರಣೆ ಮಾಡಿದ ಪಾಲಿಕೆ ಆಯುಕ್ತರು
ದೀಪಾವಳಿ ಹಬ್ಬದ ಪ್ರಯುಕ್ತ ಬಿ-ಪ್ಯಾಕ್ ವತಿಯಿಂದ ಪೌರಕಾರ್ಮಿಕರಿಗೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಜಿಬಿಎ ಕೇಂದ್ರ ಕಛೇರಿಯ ಕೌನ್ಸಿಲ್ ಕಟ್ಟಡದ ಮುಂಭಾಗದಲ್ಲಿ ಸಿಹಿ ತಿನಿಸುಗಳನ್ನು ವಿತರಿಸಿದರು. ಪೌರಕಾರ್ಮಿಕರ ಶ್ರಮವನ್ನು ಗುರುತಿಸಿ ಬಿ-ಪ್ಯಾಕ್ ಸಂಸ್ಥೆಯು ಸತತ 5 ವರ್ಷಗಳಿಂದ ಸಿಹಿ ತಿನಿಸು ವಿತರಿಸುತ್ತಿದ್ದು, ಈ ವರ್ಷವೂ ನಗರದಲ್ಲಿರುವ ಸುಮಾರು 28,000 ಪೌರಕಾರ್ಮಿಕ ಸಿಬ್ಬಂದಿಗೆ ದೀಪಾವಳಿ ಹಬ್ಬದ ಅಂಗವಾಗಿ ಸಿಹಿ ತಿನಿಸು ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕಾರ್ಯಕ್ರಮದ ಭಾಗವಾಗಿ ಇಂದು ಸಂಪಂಗಿರಾಮನಗರ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಮುಖ್ಯ ಆಯುಕ್ತರು ಸಿಹಿ ತಿನಿಸು ವಿತರಿಸಿದರು.