ಶಿರಸಿ: 555 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು : ತಾಪಂ ಸಭಾಭವನದಲ್ಲಿ ಕೃಷಿ ಇಲಾಖೆಯ ಮಧುಕರ ನಾಯ್ಕ ಮಾಹಿತಿ
ಶಿರಸಿ : ಬಿತ್ತನೆ ಬೀಜ ದಾಸ್ತಾನಿದ್ದು, ೫೫೫ ಕ್ವಿಂಟಾಲ್ ದಾಸ್ತಾನಿದೆ. ೧೪ ಕ್ವಿಂಟಾಲ್ ಮಾತ್ರ ಖರ್ಚಾಗಿದೆ. ರೈತರು ಬಿತ್ತನೆ ಬೀಜ ಪಡೆದುಕೊಳ್ಳಬಹುದಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಧುಕರ ನಾಯ್ಕ ಹೇಳಿದರು.ಅವರು ಶುಕ್ರವಾರ ನಗರದ ತಾಪಂ ಸಭಾಂಗಣದಲ್ಲಿ ಆಡಳಿತಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕೃಷಿ ಇಲಾಖೆ ವರದಿ ಸಲ್ಲಿಸಿದರು. ವಿವಿಧ ಗ್ರಾಪಂ ಗಳಲ್ಲಿ ರೈತರು ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಹಣ ಪಡೆದುಕೊಂಡಿದ್ದಾರೆ ಎಂದರು.