ಚಿಕ್ಕಮಗಳೂರು: ಬ್ಯಾಟ್ ಹಿಡಿದು ಕ್ರಿಕೆಟ್ ಆಡಿದ ಹಾಲಿ-ಮಾಜಿ ಶಾಸಕರು.! ಪೊಲೀಸ್ ಇಲಾಖೆ ಆಯೋಜಿಸಿದ್ದ ಕ್ರಿಕೆಟ್ ಮ್ಯಾಚ್ಗೆ ನಗರದಲ್ಲಿ ಚಾಲನೆ.!
ಮಾಸ್ಟರ್ಸ್ ಕ್ರಿಕೆಟ್ ಕ್ಲಬ್ ಉಪ್ಪಳ್ಳಿ ಹಾಗೂ ಬಸವನಹಳ್ಳಿ ಪೊಲೀಸ್ ಠಾಣೆ ಚಿಕ್ಕಮಗಳೂರು ಇವರ ಸಹಯೋಗದಲ್ಲಿ ನಡೆದ 40ವರ್ಷ ಮೇಲ್ಪಟ್ಟವರ ಕ್ರಿಕೆಟ್ ಪಂದ್ಯಾವಳಿಯನ್ನ ಶಾಸಕ ತಮ್ಮಯ್ಯ, ಮಾಜಿ ಶಾಸಕ ಹಾಗೂ ಎಂಎಲ್ಸಿ ಸಿ.ಟಿ ರವಿ ಉದ್ಘಾಟಿಸಿದರು. ಈ ವೇಳೆ ಹಾಲಿ - ಮಾಜಿ ಶಾಸಕರಿಬ್ಬರೂ ಬ್ಯಾಟ್ ಹಿಡಿದು ಕ್ರಿಕೆಟ್ ಆಡಿದರು. ಈ ಕ್ರಿಕೆಟ್ ಪಂದ್ಯಾವಳಿಯನ್ನು ಮಾದಕ ವಸ್ತುಗಳು ಹಾಗೂ ದುಶ್ಚಟಗಳಿಂದ ದೂರ ಇರಲು ಕ್ರೀಡೆ ಒಂದು ಉತ್ತಮಮಾರ್ಗ ಎಂಬ ಸಂದೇಶವನ್ನು ಯುವ ಪೀಳಿಗೆಗೆ ರವಾನಿಸುವ ಸಲುವಾಗಿ ಪಂದ್ಯಾವಳಿಯನ್ನು ಆಯೋಜಿಸಿರುವುದು ಉತ್ತಮ ಕಾರ್ಯ ಎಂಬ ಧ್ಯೇಯ ವಾಕ್ಯದಡಿ ಆಯೋಜಿಸಿದ್ದರು.