ನಗರದ ಕಾಜುಭಾಗದ ಸೆಂಟ್ ಜೊಸೆಪ್ಸ್ ಪ್ರೌಢ ಶಾಲೆ ಜೀರ್ಣಾವಸ್ಥೆ ತಲುಪಿದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ದಿವ್ಯಶ್ರೀ ಸಿ.ಎಂ. ಹಾಗೂ ಮಕ್ಕಳ ಆಯೋಗದ ಸದಸ್ಯ ತಿಪ್ಪೇಸ್ವಾಮಿ ಕೆ.ಟಿ. ಗುರುವಾರ ಸಂಜೆ 4.30ಕ್ಕೆ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.