ಚಿಕ್ಕಮಗಳೂರು: ವಾಟರ್ಮ್ಯಾನ್ನಿಂದ ಗ್ರಾ.ಪಂ. ಸಭಾ ನಡವಳಿ ಉಲ್ಲಂಘನೆ ಆರೋಪ.! ತಾ.ಪಂ. ಇಓ ವಿರುದ್ಧ ಸದಸ್ಯರ ಆಕ್ರೋಶ..
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ನಾಗರಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗಾಂಧಿನಗರ ಗ್ರಾಮದ ವಾಟರ್ ಮ್ಯಾನ್ ಮಲ್ಲೇಶ್ ನಾಯ್ಕ್ ನಿರಂತರವಾಗಿ ಕರ್ತವ್ಯ ಲೋಪ ಮಾಡುತ್ತಾ ಬಂದಿದ್ದು. ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡ ಸಭಾ ನಡವಳಿಯ ನಿರ್ಧಾರವನ್ನು ಉಲ್ಲಂಘನೆ ಮಾಡಿದ್ದಾನೆ ಈತನ ವಿರುದ್ಧ ಶಿಸ್ತು ಕ್ರಮಕ್ಕೆ ತಾಲೂಕು ಪಂಚಾಯಿತಿ ಇಓ ಅವರಿಗೆ ಮನವಿ ಮಾಡಿದ್ದರು ಸ್ಪಂದಿಸುತ್ತಿಲ್ಲ ಎಂದು ನಾಗರಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ್ ಆರೋಪಿಸಿದ್ದಾರೆ.