ಟೇಕಲ್ನಲ್ಲಿ ಕರ್ನಾಟಕ ಜನಸೇವಕ ಸಂಘದಲ್ಲಿ ಕನ್ನಡ ರಾಜ್ಯೋತ್ಸವದಂದು ಉಚಿತ ಆರೋಗ್ಯ ಶಿಬಿರ ಯಶಸ್ವಿ ಕೆ.ವಿ.ಆರ್.ಮಂಜುನಾಥಗೌಡ ಮಾಲೂರು : ಎಲ್ಲರಿಗೂ ಆರೋಗ್ಯದ ಸೌಲಭ್ಯ ಕಲ್ಪಿಸಿ ಅವರನ್ನು ಅನಾರೋಗ್ಯದಿಂದ ದೂರ ಮಾಡಲು ಮತ್ತು ಆರೋಗ್ಯವಂತರಾಗಿರಲು ಪೌಷ್ಟಿಕ ಆಹಾರ ಕಾಲಕಾಲಕ್ಕೆ ಸೇವಿಸಿದರೆ ದೀರ್ಘಾಯುಶ್ಯವಾಗಿ ಬಾಳಲು ಅನುಕೂಲವಾಗುತ್ತದೆಂದು ಕರ್ನಾಟಕ ಜನಸೇವಕರ ಸಂಘದ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಕೆ.ವಿ.ಆರ್.ಮಂಜುನಾಥಗೌಡ ತಿಳಿಸಿದರು. ಅವರು ಟೇಕಲ್ನ ಕೆ.ಜಿ.ಹಳ್ಳಿಯಲ್ಲಿ ಅವರ ಕಛೇರಿ ಮುಂಭಾಗ ೭೦ನೇ ವರ್ಷದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸೋಮವಾರ ನಾಡಧ್ವಜಾರೋಹಣ ನೆರವೇರಿಸಿ ನಂತರ ಟೇಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಆರೋಗ್ಯ ಶಿಬಿ