ಚಿಕ್ಕಮಗಳೂರು: ನನ್ನ ಮತ, ನನ್ನ ಹಕ್ಕು.! ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆ ಬೈಕ್ ಜಾಥಾಗೆ ಡಿಸಿ ಚಾಲನೆ.!
ಪ್ರಜಾಪ್ರಭುತ್ವ ದಿನಾಚರಣೆಯ ಹಿನ್ನೆಲೆಯಲ್ಲಿ ನನ್ನ ಮತ ನನ್ನ ಹಕ್ಕು ಧ್ಯೇಯ ವಾಕ್ಯದೊಂದಿಗೆ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಬೈಕ್ ರ್ಯಾಲಿಯನ್ನ ಹಮ್ಮಿಕೊಂಡಿದ್ದು ಚಿಕ್ಕಮಗಳೂರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಬೈಕ್ ಜಾಥಾಗೆ ಚಾಲನೆ ಕೊಡಲಾಯಿತು. ಚಿಕ್ಕಮಗಳೂರು ಜಿಲ್ಲಾಧಿಕಾರಿ ನೀನಾ ನಾಗರಾಜ್, ಜಾಥಾಗೆ ಚಾಲನೆ ನೀಡಿದ್ರು. ಈ ಸಂದರ್ಭದಲ್ಲಿ ಎಸ್ ಪಿ ವಿಕ್ರಂ ಅಮಟೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕ್ರೀಡಾ ಯುವಜನ ಇಲಾಖೆಯ ಉಪನಿರ್ದೇಶಕೆ ಮಂಜುಳಾ ಹುಲ್ಲಳ್ಳಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.