ಬೆಂಗಳೂರು ಉತ್ತರ: ಬಿಹಾರ ಚುನಾವಣೆ; ದೇಶದ ಜನ ಕಾಂಗ್ರೆಸ್ ಅನ್ನ ಒಪ್ಪೋದಿಲ್ಲ: ನಗರದಲ್ಲಿ ಅರಗ ಜ್ಞಾನೇಂದ್ರ
ಬಿಹಾರ ಚುನಾವಣೆ ಎಕ್ಸಿಟ್ ಪೋಲ್ ನೋಡಿದ್ದೇವೆ ದೇಶ ಎತ್ತ ಹೋಗುತ್ತಿದೆ ಎಂದು ಎಕ್ಸಿಟ್ ಪೋಲ್ ಹೇಳಿದೆ. ಇನ್ನಿಲ್ಲದ ಆರೋಪ ಮಾಡಿತ್ತು ಕಾಂಗ್ರೆಸ್ ನಾಡಿದ್ದು ಫಲಿತಾಂಶ ದೊಡ್ಡದಾಗಿ ಬರಲಿದೆ ಕಾಂಗ್ರೆಸ್ ನ್ನು ಜನರು ಒಪ್ಪೋದಿಲ್ಲ ಎಂದು ಶಾಸಕ ಅರಗ ಜ್ಞಾನೇಂದ್ರ ಬುಧವಾರ ಸಂಜೆ 4 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಲ್ಲೇಶ್ವರಂ ನಲ್ಲಿ ಮಾತನಾಡಿದರು. ದೆಹಲಿ ಕಾರ್ ಬ್ಲಾಸ್ಟ್ ಕುರಿತು ರಾಜ್ಯದ ಮಂತ್ರಿ ಒಬ್ಬರು ಅಮಿತ್ ಶಾ ಬಗ್ಗೆ ಕೀಳಾಗಿ ಮಾತಾಡಿದ್ದು. ಈ ಕುರಿತು ಮಾತನಾಡಿದ ಅವರು ಯುಪಿಎ ಸರ್ಕಾರ ಇದ್ದಾಗ ಮನೆಯಿಂದ ಹೊರಗೆ ಹೋದರೆ ಮನೆಗೆ ವಾಪಸ್ ಆಗುವ ಧೈರ್ಯ ಇರಲಿಲ್ಲ. 14 ವರ್ಷಗಳ ಬಳಿಕ ಈ ಸ್ಫೋಟ ಆಗಿದೆ. ಪಾಕಿಸ್ತಾನ ಪ್ರಚೋದನೆ ಇಂದ ಆಗಿದೆ. ವಿದ್ಯಾವಂತರು ಬಾಂಬ್ ತಯಾರು ಮಾಡಿದ್ದಾರೆ