ಕೋಲಾರ: ಶಿಕ್ಷಕಿಗೆ ಥಳಿಸಿ ಆಂಧ್ರಪ್ರದೇಶದ ಲೆಮರೆಸಿಕೊಂಡಿದ್ದ ಪೋಷಕನ ಬಂಧನ: ನಗರದ ತಮ್ಮ ಕಚೇರಿಯಲ್ಲಿ ಎಸ್ಪಿ ನಿಖಿಲ್
Kolar, Kolar | Sep 17, 2025 ಮಾಲೂರು ತಾಲ್ಲೂಕಿನ ಕ್ಷೇತ್ರನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನುಗ್ಗಿ ಕರ್ತವ್ಯದಲ್ಲಿದ್ದ ಶಿಕ್ಷಕಿ ಮಂಜುಳಾ ಅವರನ್ನು ಥಳಿಸಿದ್ದ ಅದೇ ಗ್ರಾಮದ ಪೋಷಕ, ಆಟೊ ಚಾಲಕ ಚೌಡಪ್ಪ ಎಂಬುವರನ್ನು ಮಾಸ್ತಿ ಠಾಣೆ BHಪೊಲೀಸರು ಬಂಧಿಸಿದ್ದಾರೆ ಎಂದು ಎಸ್ಪಿ ನಿಖಿಲ್ ತಿಳಿಸಿದರು. ನಗರದ ತಮ್ಮ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಂಗಳವಾರ ಸಂಜೆ ಮಾತನಾಡಿದ ಅವರು ಎರಡು ದಿನಗಳಿಂದ ಶಾಲೆಗೆ ಏಕೆ ಬಂದಿಲ್ಲವೆಂದು ಆರನೇ ತರಗತಿ ವಿದ್ಯಾರ್ಥಿಯನ್ನು ಮಂಜುಳಾ ಪ್ರಶ್ನಿಸಿದ್ದರು.ನಂತರ ಶಾಲೆಗೆ ಬಂದಿದ್ದ ಆ ವಿದ್ಯಾರ್ಥಿಯ ತಂದೆ ಚೌಡಪ್ಪ (45), ಶಿಕ್ಷಕಿ ಮೇಲೆ ಹಲ್ಲೆ ನಡೆಸಿದ್ದರು ಈಗ ಮಾಸ್ತ ಪೊಲೀಸರು ಆತನನ್ನ ಬಂಧಿಸಿದ್ದಾರೆ ಎಂದ್ರು