ಕಲಬುರಗಿ: ಆಳಂದದ ಸುಂಟನೂರ್ ಶಾಲೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಜಾಗೃತಿ
ಕಲಬುರಗಿಯ ಆಳಂದ ತಾಲೂಕಿನ ಸುಂಟನೂರ್ ಸರಕಾರಿ ಪ್ರೌಢಶಾಲೆಯಲ್ಲಿ ಅಕ್ಕ ಪಡೆಯಿಂದ ಬಾಲ್ಯವಿವಾಹ, ಪೋಕ್ಸೋ, ಸೈಬರ್ ಅಪರಾಧ ಹಾಗೂ ರಸ್ತೆ ಸುರಕ್ಷತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. ಯಾವುದೇ ಸಮಸ್ಯೆ ಇದ್ದರೆ 112, 181 ಮತ್ತು 1098 ಸಹಾಯವಾಣಿಗೆ ಕರೆ ಮಾಡಲು ಸೂಚಿಸಲಾಗಿದೆ.