ಕಲಬುರಗಿ: ಕಲಬುರಗಿ ಪೊಲೀಸರ ಕಾರ್ಯಾಚರಣೆ ಕುಖ್ಯಾತ ಮನೆಗಳ್ಳನ ಬಂಧನ
ಕಲಬುರಗಿಯ ಗಾಬರೆ ಲೇಔಟ್ ನಲ್ಲಿ ಈರಣ್ಣ ಎಂಬುವವರ ಮನೆಯಲ್ಲಿ ಬರೋಬ್ಬರಿ 20.60 ಲಕ್ಷ ಮೌಲ್ಯದ ಬಂಗಾರ ಬೆಳ್ಳಿ ಹಾಗೂ ನಗದು ಕಳ್ಳತನ ಮಾಡಿದ್ದ ಕಳ್ಳನನ್ನು ಸ್ಟೇಷನ್ ಬಜಾರ್ ಪೊಲೀಸರು ಬಂಧಿಸಿದ್ದಾರೆ.ನವೀನ್ ಜೋಶಿ ಬಂಧಿತ. ಬಂಧಿತನಿಂದ 20.40 ಲಕ್ಷ ಮೌಲ್ಯದ ಚಿನ್ನ ಬೆಳ್ಳಿ ಹಾಗೂ ಹಣ ವಶಕ್ಕೆ ಪಡೆದಿದ್ದಾರೆ. ಪುಣೆಯಿಂದ ಕನ್ಯಾಕುಮಾರಿ ಹೋಗಿ ಕಳ್ಳತನ ಮಾಡಲು ಪ್ಲಾನ್ ಮಾಡಿದ್ದ, ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡುತ್ತಿದ್ದ ಕಳ್ಳನನ್ನು ಟಿಸಿ ಕಲಬುರ್ಗಿಯಲ್ಲಿ ಇಳಿಸಿದ್ದ.ಡಿ.11 ರಂದು ಮಾಹಿತಿ ಗೊತ್ತಾಗಿದೆ