ಶಿರಸಿ: ಜಿಲ್ಲೆಯಲ್ಲಿ ಮಳೆಯ ಅಬ್ಬರ : ದೇವಿಮನೆ ಘಟ್ಟ ಭಾಗದಲ್ಲಿ ಮುಂದುವರೆದ ಗುಡ್ಡ ಕುಸಿತ
ಶಿರಸಿ : ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಕಡಿಮೆಯಾದರೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತವಾಗುತಿದ್ದು ವಾಹನ ಸಂಚಾರಕ್ಕೂ ಇದೀಗ ವಿಘ್ನ ಎದುರಾಗಿದ್ದು ಸವಾರರು ಭಯದಲ್ಲೇ ಸಂಚರಿಸುವಂತಾಗಿದೆ. ಅದರಲ್ಲೂ ಶಿರಸಿ - ಕುಮಟಾ ರಸ್ತೆಯಲ್ಲಿ ಮತ್ತಷ್ಟು ಆತಂಕ ಮುಂದುವರೆದಿದೆ. ಕೆಲವು ದಿನಗಳ ಹಿಂದೆಯಷ್ಟೇ ಮಳೆಯ ಅಬ್ಬರಕ್ಕೆ ದೇವಿಮನೆ ಘಟ್ಟ ಭಾಗದ ಬೆಣ್ಣೆಹೊಳೆಗೆ ಕಟ್ಟಿದ್ದ ತಾತ್ಕಾಲಿಕ ಸೇತುವೆ ಕೊಚ್ಚಿಹೋಗಿ ಸಂಚಾರವೇ ಬಂದ್ ಆಗಿತ್ತು.ನಂತರ ತಾತ್ಕಾಲಿಕವಾಗಿ ರಸ್ತೆ ಸಂಪರ್ಕ ಕಲ್ಪಿಸಿ ಶಿರಸಿ-ಕುಮಟಾ ಭಾಗಕ್ಕೆ ತೆರಳಲು ಲಘು ವಾಹನಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ಆದರೇ ಇದೀಗ ಇದೇ ಭಾಗದಲ್ಲಿ ಕಳೆದ ಮೂರು ದಿನದಿಂದ ಗುಡ್ಡ ಕುಸಿತವಾಗುತಿದೆ.