ಶಿರಸಿ: ನಗರಸಭೆಯಿಂದ ಉದ್ಯಾನವನದಲ್ಲಿ ಕಸದ ತೊಟ್ಟಿ ಆಳವಡಿಕೆ : ದೇವಿ ಕೆರೆಯಲ್ಲಿ ಸಾಂಕೇತಿಕ ಉದ್ಘಾಟನೆ
ಶಿರಸಿ : ನಗರದ ವಿವಿಧ ಉದ್ಯಾನವನಗಳಲ್ಲಿ ಸ್ವಚ್ಚತೆಗೆ ಅದ್ಯತೆ ನೀಡುವ ನಿಟ್ಟಿನಲ್ಲಿ ನಗರಸಭೆಯ 15 ನೇ ಹಣಕಾಸಿನ ಯೋಜನೆ ಅಡಿಯಲ್ಲಿ 15 ಕಸದ ತೊಟ್ಟಿಗಳನ್ನು ಖರಿದಿಸಲಾಗಿದ್ದು ಅದರಲ್ಲಿ 8 ಕಸದ ತೊಟ್ಟಿಗಳನ್ನು ನಗರದ ಹೃದಯ ಭಾಗದಲ್ಲಿರುವ ದೇವಿಕೆರೆ ಉದ್ಯಾನವನದಲ್ಲಿ ಆಳವಡಿಸಲಾಗಿದೆ. ಬುಧವಾರ ದೇವಿಕೆರೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕಸದ ತೊಟ್ಟಿ ಆಳವಡಿಕೆಯನ್ನು ಸಾಂಕೇತಿಕವಾಗಿ ಉದ್ಘಾಟನೆ ಮಾಡಲಾಯಿತು. ಉಳಿದ ಕಸದ ತೊಟ್ಟಿಗಳನ್ನು ಅವಶ್ಯ ಇರುವ ಉದ್ಯಾನವನದಲ್ಲಿ ಅಳವಡಿಸಲಾಗುವುದು ಹಾಗೂ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಇದೇ ವೇಳೆ ನಗರಸಭೆ ಅದ್ಯಕ್ಷೆ ಶರ್ಮಿಳಾ ಮಾದನಗೇರಿ ಹೇಳಿದರು.