ವಿಪಕ್ಷ ನಾಯಕ ಆರ್ ಅಶೋಕ್ ಅವರು, ರಾಜ್ಯ ಸರ್ಕಾರ ವಿಶೇಷ ಅಧಿವೇಶನ ಕರೆದು, ಕೇಂದ್ರದ ಯೋಜನೆಗೆ ಅಡ್ಡಗಾಲು ಹಾಕಲು ನಿರ್ಧಾರ ಮಾಡಿದೆ ಎಂದು ವಿಧಾನಸೌಧದ ಬಳಿ ಬುಧವಾರ ಸಂಜೆ 4 ಗಂಟೆ ಸುಮಾರಿಗೆ ಮಾತನಾಡಿದರು. ಕೇಂದ್ರಕ್ಕೆ ನಿರ್ಣಯ ಕಳಿಸೋ ನೀಚ ಕಾರ್ಯ ಈ ಸರ್ಕಾರ ಮಾಡ್ತಿದೆ. VB-G RAM-G ಯೋಜನೆ ಕೂಲಿ ಮಾಡುವವರಿಗೇ ಹಣ ಕೊಡಿಸೋ ಪ್ರಯತ್ನ ಮೋದಿ ಸರ್ಕಾರ ಮಾಡ್ತಿದೆ. CAG ವರದಿಯಲ್ಲಿ ಕೂಡ ಸಾವಿರಾರು ಕೋಟಿ ಅಕ್ರಮದ ಬಗ್ಗೆ ವರದಿ ಇದೆ. 60:40 ಕೇಂದ್ರ ರಾಜ್ಯದ ಪಾಲನ್ನ ತರಲಾಗಿದೆ. 125 ದಿನಕ್ಕೆ ಯೋಜನೆ ಹೆಚ್ಚಿಸಲಾಗಿದೆ. ಇದಕ್ಕೆ ಕಾಂಗ್ರೆಸ್ ಗೆ ಹೊಟ್ಟೆ ಉರಿ. ಕೇಂದ್ರದ ನಾಯಕರಿಗೆ ಪತ್ರ ಬರೆದಿದ್ದಾರೆ. ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು ಮನವಿ ಮಾಡಿದೆ ಎಂದರು.