ದಾವಣಗೆರೆ: ನಗರದ ಬಡಾವಣೆ ಠಾಣೆಯ ಪೊಲೀಸ್ ತುಮಕೂರಿನಲ್ಲಿ ಆತ್ಮಹತ್ಯೆ
ದಾವಣಗೆರೆ ನಗರದ ಬಡಾವಣೆ ಪೊಲೀಸ್ ಠಾಣೆಯ ಪಿಎಸ್‌ಐ ನಾಗರಾಜ್ ಅವರು ತುಮಕೂರಿನ ದ್ವಾರಕಾ ಲಾಡ್ಜ್‌ನಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಜುಲೈ 1ರಂದು ದಾವಣಗೆರೆಯಿಂದ ಹೊಗಿದ್ದ ಪಿಎಸ್ ನಾಗರಾಜ್ ಅವರು ತುಮಕೂರಿನ ದ್ವಾರಕಾ ಲಾಡ್ಜ್‌ನಲ್ಲಿ ತಂಗಿದ್ದರು. ಸುಮಾರು ಸಮಯದಿಂದ ಬಾಗಿಲು ತೆರೆಯದೇ ಇದ್ದರಿಂದ ಹಾಗೂ ರೂಂನಿಂದ ಕೆಟ್ಟ ವಾಸನೆ ಬಂದ ಕಾರಣ ಸಿಬ್ಬಂದಿ ಬಾಗಿಲು ಒಡೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ನಾಗರಾಜ್ ಅವರ ಮೃತದೇಹ ಪತ್ತೆಯಾಗಿದೆ. ಕೂಡಲೇ ತುಮಕೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು. ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿರುವುದು ಭಾನುವಾದ ಮಧ್ಯಾಹ್ನ 12 ಗಂಟೆಗೆ ತಿಳಿದು ಬಂದಿದೆ.