ಕಂಪ್ಲಿ ಪಟ್ಟಣದ 20ನೇ ವಾರ್ಡ್, ಶಿಬರದಿನ್ನಿಯ ಬಲಭಾಗದಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಜಾಗದಲ್ಲಿ ಅತಿಕ್ರಮಣ ನಡೆದಿದೆ ಎಂಬ ದೂರು ಹಿನ್ನೆಲೆಯಲ್ಲಿ, ತಹಸೀಲ್ದಾರ್ ಕಚೇರಿಯ ಕಂದಾಯ ನಿರೀಕ್ಷಕ ವೈ.ಎಂ. ಜಗದೀಶ್ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ಡಿ.12, ಶುಕ್ರವಾರ, ಮಧ್ಯಾಹ್ನ 12ಕ್ಕೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ದೂರುದಾರ ಸಂಜೀವ ಅವರು ಮಾತನಾಡಿ, ಸರ್ವೇ ನಂ. 619ರ, 1.59 ಎಕರೆಯಲ್ಲಿನ 74 ಸೆಂಟ್ ಪ್ರದೇಶವು ಪುರಸಭೆಯ ಸ್ವತ್ತಾಗಿದ್ದು, ಅದರಲ್ಲೇ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ, ಕಲ್ಯಾಣಿ ಹಾಗೂ ತುಳಸಿ