ಜಮಖಂಡಿ: ನಗರದಲ್ಲಿ ಬೆಳಗಾವಿ ಹಾಗೂ ಗುಲಬುರ್ಗಾ ವಿಭಾಗದಲ್ಲಿ ಅನ್ಯ ರಾಜ್ಯದ ವಾಹನಗಳನ್ನು ಜಪ್ತು ಮಾಡಿದ ಅಪರ ಸಾರಿಗೆ ಆಯುಕ್ತ ಕೆ.ಟಿ.ಹಾಲಸ್ವಾಮಿ
ಕರ್ನಾಟಕ ರಾಜ್ಯದ ಬೆಳಗಾವಿ ಹಾಗೂ ಗುಲಬುರ್ಗಾ ವಿಭಾಗದ ವಿಜಯಪುರ ಜಿಲ್ಲೆ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಅಪರ ಸಾರಿಗೆ ಆಯುಕ್ತ ಕೆ.ಟಿ.ಹಾಲಸ್ವಾಮಿ ನೇತೃತ್ವದಲ್ಲಿ ವಿಷೇಶವಾದ ತಂಡ ರಚನೆ ಮಾಡಿ ಅನ್ಯ ರಾಜ್ಯದ ವಾಹನಗಳನ್ನು ಜಪ್ತಿ ಮಾಡಿದ್ದಾರೆ.ಜಮಖಂಡಿ ನಗರದ ಆರ್.ಟಿ.ಒ ಕಚೇರಿಯಲ್ಲಿ ಮಾದ್ಯಮದ ಮೂಲಕ ಮಾತನಾಡಿ ಕರ್ನಾಟಕ ರಾಜ್ಯದ ನಿವಾಸಿಗಳು ಪಾಂಡಿಚೇರಿ,ಮಹಾರಾಷ್ಟ್ರ, ಆಂದ್ರಪ್ರದೇಶದ ಸೇರಿದಂತೆ ವಿವಿಧ ರಾಜ್ಯಗಳಿಂದ ವಾಹನಗಳನ್ನು ಖರೀದಿ ಮಾಡಿ ತೆರೆಗೆ ಉಳಿತಾಯಿ ಮಾಡುವ ಉದ್ದೇಶದಿಂದ ನೊಂದನೆ ಮಾಡುತಿದ್ದಾರೆ ಅದರಿಂದ ಕರ್ನಾಟಕ ರಾಜ್ಯಕ್ಕೆ ಬರುವ ತೆರಿಗೆ ನಷ್ಟ ಆಗುತ್ತಿದೆ ಎಂದರು.