ಬೆಂಗಳೂರು ಉತ್ತರ: ನಗರದಲ್ಲಿ ವಿದ್ಯಾರ್ಥಿ ವೇತನ ಹಂಚಿಕೆ ಕಾರ್ಯಕ್ರಮ ಉದ್ಘಾಟಿಸಿದ ಸಚಿವ ದಿನೇಶ್ ಗುಂಡೂರಾವ್
ಭಾನುವಾರ ಮಧ್ಯಾಹ್ನ 3:30 ರ ಸುಮಾರಿಗೆ ಗಾಂಧಿ ನಗರ ಕ್ಷೇತ್ರದ ಕಾಟನ್ ಪೇಟೆಯಲ್ಲಿರುವ ನಿಮಿಷಾಂಭದೇವಿ ಕಲ್ಯಾಣ ಮಂಟಪದಲ್ಲಿ ನಿಮಿಷಾಂಭದೇವಿ ಟ್ರಸ್ಟ್ ರವರು ಆಯೋಜಿಸಿರುವ ವಿದ್ಯಾರ್ಥಿ ವೇತನ ಹಂಚಿಕೆ ಕಾರ್ಯಕ್ರಮವನ್ನು ಸಚಿವ ದಿನೇಶ್ ಗುಂಡೂರಾವ್ ಅವರು ಉದ್ಘಾಟಿಸಿ ಮಾತನಾಡಿದರು, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದಾಗ ಮತ್ತಷ್ಟು ಸಾಧನೆ ಮಾಡಲು ಪ್ರೇರೇಪಣೆ ಸಿಗುತ್ತದೆ. ವಿದ್ಯಾರ್ಥಿ ವೇತನದಿಂದ ಶೈಕ್ಷಣಿಕವಾಗಿ ಅವಶ್ಯಕತೆ ಇರುವ ಉಪಕರಣಗಳು, ಪುಸ್ತಕಗಳು ವಿದ್ಯಾರ್ಥಿಗಳು ಕೊಂಡುಕೊಳ್ಳಲು ಸಹಾಯವಾಗುತ್ತದೆ. ಶಿಕ್ಷಣವನ್ನು ಎಲ್ಲರಿಗೂ ಎಲ್ಲೆಡೆ ಸಿಕ್ಕಾಗ ಆ ಪ್ರದೇಶದಲ್ಲಿ ಉತ್ತಮ ವಾತಾವರಣ, ಸಂಸ್ಕೃತಿ ತಾನಾಗಿಯೇ ಬೆಳೆಯುತ್ತದೆ ಎಂದರು.