ಕೆ.ಜಿ.ಎಫ್: ಸಚಿವ ಸತೀಶ್ ಜಾರಕಿಹೊಳಿ ಅಮೃತ ಹಸ್ತದಿಂದ ನಲ್ಲೂರು ಸೇತುವೆಗಳ ಲೋಕಾರ್ಪಣೆ
ಸಚಿವ ಸತೀಶ್ ಜಾರಕಿಹೊಳಿ ಅಮೃತ ಹಸ್ತದಿಂದ ನಲ್ಲೂರು ಸೇತುವೆಗಳ ಲೋಕಾರ್ಪಣೆ ಕೆಜಿಎಫ್ ತಾಲೂಕಿನ ಬೇತಮಂಗಲ ಹೋಬಳಿಯ ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿಯ ನಲ್ಲೂರು ಗ್ರಾಮದ ಬಳಿ ಬೇತಮಂಗಲ ಕೆರೆಗೆ ನೀರು ಹರಿಯುವ ಪಾಲಾರ್ ಹೊಳೆಗೆ ಹೊಸದಾಗಿ ನಿರ್ಮಾಣವಾಗಿರುವ ಸೇತುವೆಯ ಕಾಮಗಾರಿಗಳ ಲೋಕಾರ್ಪಣೆಯನ್ನು ಬುಧವಾರ ಮಧ್ಯಾಹ್ನ 1 ಗಂಟೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಲೋಕಾರ್ಪಣೆ ಮಾಡಿದ್ದಾರೆ ಹೊಸದಾಗಿ ಎರಡು ಸೇತುವೆ ನಿರ್ಮಾಣ ಮಾಡಲು ರೂ.೬.೦೦ ಕೋಟಿ, ಬಡಮಾಕನಹಳ್ಳಿ ಬಳಿ ಒಂದು ಸೇತುವೆ ಹಾಗೂ ಸಂಪರ್ಕ ರಸ್ತೆಗೆ ೪ ಕೋಟಿ ರೂ ಸೇರಿ ಒಟ್ಟು ೧೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ