ಮದ್ದೂರು: ಆಬಲವಾಡಿ ಗ್ರಾಮದ ಪ್ರಮುಖ ವೃತ್ತಕ್ಕೆ 'ಡಿ.ಸಿ.ತಮ್ಮಣ್ಣ ವೃತ್ತ' ಎಂದು ನಾಮಕರಣ
Maddur, Mandya | Oct 7, 2025 ಮದ್ದೂರು ತಾಲ್ಲೂಕು ಆಬಲವಾಡಿ ಗ್ರಾಮದ ಪ್ರಮುಖ ವೃತ್ತಕ್ಕೆ ಡಿ.ಸಿ.ತಮ್ಮಣ್ಣ ವೃತ್ತ ಎಂದು ನಾಮಕರಣ ಮಾಡಿ ಗ್ರಾ.ಪಂ ಅಧ್ಯಕ್ಷ ಸುರೇಶ್ ಉದ್ಘಾಟಿಸಿದರು. ಆಬಲವಾಡಿ ಗ್ರಾಮದಕ್ಕೆ ಮಾಡಿರುವ ಅಭಿವೃದ್ದಿ ಕೆಲಸಗಳನ್ನು ಗುರುತಿಸಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರ ಹೆಸರನ್ನು ಆಬಲವಾಡಿ ಗ್ರಾಮದ ಪ್ರಮುಖ ರಸ್ತೆಗೆ ಇಡಲಾಗಿದೆ ಎಂದು ಗ್ರಾ.ಪಂ ಅಧ್ಯಕ್ಷ ಸುರೇಶ್ ತಿಳಿಸಿದರು. ಆಬಲವಾಡಿ ಗ್ರಾಮವನ್ನು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡಿರುವ ಡಿ.ಸಿ.ತಮ್ಮಣ್ಣ ಅವರು ಗ್ರಾಮದ ಅಭಿವೃದ್ದಿಗೆ ಅಪಾರ ಕೊಡುಗೆಗಳನ್ನು ನೀಡುವ ಮೂಲಕ ಸಾಮಾಜಿಕವಾಗಿ, ಆಥರ್ಿಕವಾಗಿ ಮತ್ತು ಶೈಕ್ಷಣಿಕವಾಗಿ ಅಭಿವೃದ್ದಿ ಪಡಿಸುವಲ್ಲಿ ಮುಂದಾಗಿದ್ದಾರೆ ಎಂದರು. ಇವರ ಕೊಡುಗೆಗಳನ್ನು ನಮ್ಮ ಗ್ರಾಮಸ್ಥರು ಸ್ಮರಿಸುತ್ತಾ ಡಿ.ಸಿ.ತಮ್ಮಣ್ಣ ವೃತ್ತ ಎಂದು ನಾಮಕರಣ ಮ