ದೊಡ್ಡಬಳ್ಳಾಪುರ: ಮಧುರನ ಹೊಸಹಳ್ಳಿಯಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಬಗ್ಗೆ ಜಾಗೃತಿ ಮೂಡಿಸಲಾಯಿತು
ದೊಡ್ಡಬಳ್ಳಾಪುರ ತಾಲೂಕಿನ ಮಧುರನಹೊಸಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆಯ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಜಲಾನಯನ ಅಭಿವೃದ್ಧಿ ಘಟಕ PMKSY - WDC-2.0 ಯೋಜನೆಯಡಿ ಸರ್ಕಾರೇತರ ಸಂಸ್ಥೆಯಾದ ಪುಣ್ಯಕೋಟಿ ಇಂಟಿಗ್ರೇಟೆಡ್ ರೂರಲ್ ಡೆವಲಪ್ಮೆಂಟ್ ಸೊಸೈಟಿ, ತುಮಕೂರು ಇವರ ವತಿಯಿಂದ ಗ್ರಾಮದಲ್ಲಿ ಬೀದಿ ನಾಟಕ ಹಾಗೂ ಜಾಥಾದ ಮೂಲಕ ಯೋಜನೆಯ ಬಗ್ಗೆ ಅರಿವು ಮೂಡಿಸಲಾಯಿತು. ಸಂಸ್ಥೆಯ ಸಿಬ್ಬಂದಿ ಮೋಹನ್ ಕುಮಾರ್, IGA ಪರಿಣಿತರಾದ ನಾಗರಾಜು ಮಾತನಾಡಿ ಮಹಿಳಾ ಸ್ವಸಹಾಯ ಸಂಘಗಳಿಗೆ ಸಬ್ಸಿಡಿಯಲ್ಲಿ ಸಾಲ, ರೈತರಿಗೆ ವ್ಯವಸಾಯಕ್ಕೆ ಸಂಬಂಧಿಸಿದ ಉಪಕರಣಗಳು, ಜಮೀನು ರಹಿತರಿಗೆ ಆಹಾರ ಸಂಸ್ಕರಣ ಘಟಕ, ಸಿರಿಧಾನ್ಯ ಸಂರಕ್ಷಣೆ, ಬೇಕರಿ, ಹಣಬೆ ಬೇಸಾಯಕ್ಕೆ ಉಚಿತವಾಗಿ ತರಬೇತಿ ನೀಡಿ ಅವಕಾಶಗಳನ್ನು ಕಲ್ಪಿಸಲಾಗು