ಪಾವಗಡ: ಪಾವಗಡದಲ್ಲಿ ಅದ್ಧೂರಿಯಾಗಿ ಚಾಲನೆ ಪಡೆದ ಗಣೇಶೋತ್ಸವ: ಭಕ್ತರಲ್ಲಿ ಮನೆಮಾಡಿದ ಸಂಭ್ರಮ
ಪಾವಗಡದ ಯೋಗಿ ನಾರಾಯಣಸ್ವಾಮಿ ದೇವಸ್ಥಾನದ ಸಮೀಪ ಬೃಹತ್ ಗಣಪತಿ ವಿಗ್ರಹ ಪ್ರತಿಷ್ಠಾಪನೆ ಮಾಡುವ ಮೂಲಕ ಗಣೇಶೋತ್ಸವಕ್ಕೆ ಅದ್ಧೂರಿ ಚಾಲನೆ ನೀಡಲಾಗಿದೆ. ಈ ಸಂದರ್ಭದಲ್ಲಿ ಅನ್ನಸಂತರ್ಪಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಭಕ್ತರು ಸಂಭ್ರಮದಿಂದ ಭಾಗವಹಿಸಿದ್ದಾರೆ.