ರಾಜ್ಯದಲ್ಲಿ ಗೃಹ ಇಲಾಖೆ ಒಂದು ರೀತಿ ಸತ್ತಿದೆ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಅವರು ಟೀಕಿಸಿದ್ದಾರೆ. ಇವತ್ತು ಪೊಲೀಸ್ ಇಲಾಖೆಯು ರಿಯಲ್ ಎಸ್ಟೇಟ್ನ ಕಚೇರಿಯಂತಾಗಿದೆ ಎಂದು ದೂರಿದ್ದಾರೆ. ಮಲ್ಲೇಶ್ವರಂ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದ ಗೃಹ ಸಚಿವರಿಗೆ ತಮ್ಮ ಜವಾಬ್ದಾರಿ ಏನೆಂದೇ ಅರ್ಥ ಆಗಿಲ್ಲ. ಕೇವಲ ಝೀರೊ ಟ್ರಾಫಿಕ್ನಲ್ಲಿ ಓಡಾಡುವುದೇ ಗೃಹ ಸಚಿವರ ಜವಾಬ್ದಾರಿ ಅಂದುಕೊಂಡಿದ್ದಾರೆ ಎಂದು ಆಕ್ಷೇಪಿಸಿದರು. ಉನ್ನತ ಅಧಿಕಾರಿ ಕಚೇರಿಯಲ್ಲಿ ಯೂನಿಫಾರ್ಮ್ನಲ್ಲಿ ಮಹಿಳೆ ಜೊತೆ ಚಕ್ಕಂದ ಆಡುವ ಮಟ್ಟಕ್ಕೆ ಪೊಲೀಸ್ ಇಲಾಖೆ ಬಂದು ನಿಂತಿದೆ ಎಂದರೆ, ಗೃಹ ಸಚಿವರು ತಮ್ಮ ಹಿಡಿತ ಇಟ್ಟುಕೊಂಡಿಲ್ಲ