ಮಾಲೂರು: ವಾಲ್ಮೀಕಿ ಆದರ್ಶಗಳನ್ನು ಯುವ ಜನತೆ ಅಳವಡಿಸಿಕೊಳ್ಳಿ: ತೋರ್ನ ಹಳ್ಳಿಯಲ್ಲಿ ಶಾಸಕ ಕೆ. ವೈ. ನಂಜೇಗೌಡ
Malur, Kolar | Oct 20, 2025 ವಾಲ್ಮೀಕಿ ಆದರ್ಶಗಳನ್ನು ಯುವ ಜನತೆ ಅಳವಡಿಸಿಕೊಳ್ಳಿ ಮಾಲೂರು ತಾಲ್ಲೂಕಿನ ಕಸಬಾ ಹೋಬಳಿಯ ತೊರ್ನಹಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ 10 ಗಂಟೆಯಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿಯ ಕಾರ್ಯಕ್ರಮದಲ್ಲಿ ಮಾಲೂರು ತಾಲ್ಲೂಕಿನ ಶಾಸಕರು ಹಾಗೂ ಕೋಮುಲ್ ಅಧ್ಯಕ್ಷರಾದ ಶ್ರೀ ಕೆ ವೈ ನಂಜೇಗೌಡ ರವರು ಭಾಗವಹಿಸಿ ವಾಲ್ಮೀಕಿ ಪುತಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ್ದಾರೆ ವಾಲ್ಮೀಕಿ ರಾಮಾಯಣ ಬರೆದ ಮಹಾನ್ ಕವಿ ವಾಲ್ಮೀಕಿ ತಮ್ಮ ರಾಮಾಯಣದಲ್ಲಿ ಜೀವನಕ್ಕೆ ಬೇಕಾದ ಎಲ್ಲ ಅಂಶಗಳನ್ನು ರಾಮಾಯಣದಲ್ಲಿ ಕೂಡಿಸಿದ್ದಾರೆ ಅವರ ಆದರ್ಶ ಚಿಂತನೆಗಳನ್ನು ನಾವು ಅಳವಡಿಸಿ ಕೊಳ್ಳಬೇಕಾಗಿದೆ ಎಂದರು.