ಬೆಂಗಳೂರು ಉತ್ತರ: ನಮ್ಮಪ್ಪನ ಆಸ್ತಿಯಲ್ಲಿ ಭಾಗಕ್ಕೆ ಬರ್ತೀಯಾ ?: ನಗರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಆಕ್ರೋಶ
ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ನಗರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಕೌಂಟರ್ ಕೊಟ್ಟಿದ್ದು, ಪಾಪ ಪ್ರತಾಪ್ ಸಿಂಹ ಅವರು ಬಹಳ ಫ್ರಸ್ಟ್ರೇಟ್ ಆಗಿ ಹೋಗಿದ್ದಾರೆ ಎಂದು ವ್ಯಂಗ್ಯ ಮಾಡಿದರು. ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಒಂದು ಮುಳ್ಳಂದಿ ಬಗ್ಗೆ ಮಾತಾಡ್ತಾರೆ ಅಂದ್ರೆ, ಅದು ಮುಳ್ಳಂದಿ ಆಗಿರಬೇಕು, ಇನ್ನ ಒಂದು ಅಪ್ಪನಿಗೆ ಹುಟ್ಟಿದ್ರೆ ಅಂತ ಮಾತಾಡ್ತಾರೆ ಪ್ರತಾಪ್ ಸಿಂಹ. ನಮ್ಮಪ್ಪನ ಬಗ್ಗೆ ನನಗೆ ಕ್ಲಾರಿಟಿ ಇದೆ. ನಮ್ಮ ಅಪ್ಪನ ಬಗ್ಗೆ ನೀನ್ಯಾಕೆ ಯೋಚನೆ ಮಾಡ್ತಾ ಇದ್ದೀಯಾ. ಯಾಕೆ ಆಸ್ತಿಯಲ್ಲಿ ಏನಾದರೂ ಭಾಗ ಕೇಳಬೇಕು ಅಂತ ಇದಿಯಾ ? ನಮ್ಮಪ್ಪನ ಬಗ್ಗೆ ನನಗೆ ಕ್ಲಾರಿಟಿ ಇದೆ ಗುರು.