ಮದ್ದೂರು: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ವಕೀಲ ಏಕಾಏಕಿ ದಾಳಿ: ರಾಜ್ಯದ್ಯಕ್ಷ ಎಂ ಪುಟ್ಟಮದು ಖಂಡನೆ
Maddur, Mandya | Oct 12, 2025 ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಒಬ್ಬ ಸನಾತನವಾದಿ ವಕೀಲ ಏಕಾಏಕಿ ದಾಳಿ ಮಾಡಿ ಶೂ ಮೂಲಕ ಅವರನ್ನು ದಾಳಿ ಮಾಡಲು ಮುಂದಾಗಿರುವುದನ್ನು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಸ್ವಾಮಿ ಖಂಡಿಸಿದರು. ಮದ್ದೂರು ತಾಲ್ಲೂಕು ಭಾರತೀನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶೂ ಎಸೆದ ಸನಾತನವಾದಿ ವಕೀಲನ ಮೇಲೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವ ಮೂಲಕ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು. ಮೈಸೂರಿನಲ್ಲಿ ಕೂಲಿಗಾಗಿ ದಸರಾ ಉತ್ಸವದಲ್ಲಿ ಜೀವನ ಮಾಡಲು ಹೊರ ಜಿಲ್ಲೆಯಿಂದ ಬಂದಿದ್ದ ಕುಟುಂಬದ 8 ವರ್ಷದ ಹೆಣ್ಣು ಮಗುವನ್ನು ಒಬ್ಬ ಕಾಮುಕ ವ್ಯಕ್ತಿ ಅತ್ಯಾಚಾರ, ಕೊಲೆ ಮಾಡಿ ಬಿಸಾಡಿರುವುದು ಅತ್ಯಂತ ಹೇಯ ಕೃತ್ಯವಾಗಿದೆ.