ಕಳಸ: ಕಳಸ ಭದ್ರ ನದಿಯ ಗೇರು ತೋಟ ಬಳಿ ಮಹಿಳೆಯ ಶವ ಪತ್ತೆ
ಕಳಸ ಭದ್ರಾ ನದಿಯ ಗೇರು ತೋಟ ಬಳಿ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ. ಮೃತ ಮಹಿಳೆ ಎನ್ ಆರ್ ಪುರದ ಶಾರದಾ(55) ಎಂದು ತಿಳಿದು ಬಂದಿದೆ. ಶಾರದ ಅವರು ಜುಲೈ 16 ಹಲ್ಲುನೋವಿಗೆ ಎನ್ ಆರ್ ಪುರಕ್ಕೆ ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಮನೆಯಿಂದ ಹೊರಟವರು ನಂತರ ಮನೆಗೆ ಬರದೆ ಕಾಣೆಯಾಗಿದ್ದರು. ಈ ಬಗ್ಗೆ ಜುಲೈ 18 ರಂದು ಎನ್ ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಕಳಸ ಭದ್ರಾ ನದಿಯಲ್ಲಿ ಪತ್ತೆಯಾಗಿರುವ ಶವ ಶಾರದ ರವರದ್ದೆ ಎಂದು ಅವರ ಕುಟುಂಬಸ್ಥರು ಗುರುತಿಸಿದ್ದಾರೆ.