ನೆಲಮಂಗಲ: ನೆಲಮಂಗಲ ನಗರಸಭಾ ವ್ಯಾಪ್ತಿಯ ಗಜಾರಿಯ ಲೇಔಟ್ ನಲ್ಲಿ ಶಾಸಕರಿಂದ ಕಾಮಗಾರಿ ಶಂಕು ಸ್ಥಾಪನೆ
ನೆಲಮಂಗಲ ನಗರಸಭಾ ವ್ಯಾಪ್ತಿಯ ಗಜಾರಿಯ ಲೇಔಟ್ ನಲ್ಲಿ ನಗರೋತ್ಥಾನ ಹಂತ-03 ರ ಯೋಜನೆಯಡಿ ನಿರ್ಮಿಸಿರುವ ಜಲ ಸಂಗ್ರಹಾಗಾರಗಳಿಗೆ ಕೊಳವೆ ಬಾವಿಗಳಿಂದ ನೀರು ಸರಬರಾಜು ಮಾಡುವ ಕಾಮಗಾರಿಯ ಶಾಸಕ ಎನ್ ಶ್ರೀನಿವಾಸ್ ಶಂಕು ಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.