ವಿಧಾನಸೌಧದಲ್ಲಿ ಬುಧವಾರ ಸಂಜೆ 5 ಗಂಟೆ ಸುಮಾರಿಗೆ ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, 22 ರಿಂದ ಮುಂದಿನ 31 ವರೆಗೆ ಜಂಟಿ ಅಧಿವೇಶನ ನಡೆಯಲಿದೆ. ರಾಜ್ಯಪಾಲರ ಭಾಷಣ, ವಂದನಾ ನಿರ್ಣಯ ಹಾಗೂ ನರೇಗಾ ವಿಷಯದ ಬಗ್ಗೆ ಕಲಾಪ ನಡೆಯಲಿದೆ. ನಾಳೆ ಬೆಳಿಗ್ಗೆ 1 ಗಂಟೆಗೆ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡ್ತಾರೆ. ನಂತರ ಭೀಮಣ್ಣ ಖಂಡ್ರೆ ಅವರಿಗೆ ಸಂತಾಪ ಸೂಚಿಸಲಾಗುತ್ತೆ. 27ನೇ ತಾರೀಖಿನಿಂದ ಪ್ರಶ್ನೋತ್ತರ ನಡೆಯುತ್ತೆ. ನಾಳೆ ಬಿಸ್ನೆಸ್ ಅಡ್ವೈಸರಿ ಕಮಿಟಿ ಮೀಟಿಂಗ್ ಇದೆ. ನಾಳೆ ಎಲ್ಲವನ್ನೂ ಚರ್ಚೆ ಮಾಡಿ ತೀರ್ಮಾನ ಮಾಡ್ತೀವಿ ಎಂದರು.