ಗೆಜ್ಜಲಗೆರೆ ಗ್ರಾಮಸ್ಥರ ಹೋರಾಟ ವಿಚಾರಕ್ಕೆ ಸಂಬಂಧಿಸಿ ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸೆವೆನ್ ಮಿನಿಸ್ಟರ್ ಕ್ವಾಟರ್ಸ್ ನಲ್ಲಿ ಸಚಿವ ಚಲುವರಾಯಸ್ವಾಮಿ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಕಳೆದೊಂದು ತಿಂಗಳಿಂದ ಹೋರಾಟ ಪ್ರಾರಂಭ ಆಗಿದೆ. ಪುರಸಭೆ ಮಾಡಬೇಕು ಎಂದು ಸ್ಥಳೀಯ ಶಾಸಕರು ಸಿಎಂಗೆ ಮನವಿ ಮಾಡಿದ್ದರು. ಈಗಾಗಲೇ ನೋಟಿಫಿಕೇಷನ್ ಆಗಿದೆ. ನಾನು ಶಾಸಕರ ಜೊತೆಗೆ ಮಾತನಾಡಿದ್ದೆ. ಅಲ್ಲಿ ಹೋಗಿ ಮಾತನಾಡುತ್ತೇನೆ ಎಂದು ಶಾಸಕರು ನನ್ನ ಬಳಿ ಹೇಳಿದ್ದರು. ಆದರೂ ಅವರ ಹೋರಾಟ ಮುಂದುವರೆಸಿದ್ದಾರೆ. ಈ ನಡುವೆ ಸಿಎಂನ ಮೈಸೂರಿನಲ್ಲಿ ಹೋರಾಟಗಾರರು ಭೇಟಿ ಮಾಡಿದ್ದರು. ಅಲ್ಲದೆ ವಿಪಕ್ಷ ನಾಯಕ ಆರ್ ಅಶೋಕ್ ಎಂಟ್ರಿ ಆಗಿದ್ದಾರೆ, ಹೋಗಿ ಬರಲಿ ಏನು ಹೇಳ್ತಾರೆ ನೋಡೋಣ ಎಂದರು.