ಮದ್ದೂರು: ಪ್ರತಾಪ್ 'ಸಿಂಹ' ಅಲ್ಲ 'ನಾಯಿ', ಬಿವೈ ವಿಜಯೇಂದ್ರ ಸಿಟಿ ರವಿ ರವರ ಉಪದೇಶ ಅಗತ್ಯವಿಲ್ಲ : ಪಟ್ಟಣದಲ್ಲಿ ಶಾಸಕ ಕೆಎಂ ಉದಯ್
Maddur, Mandya | Sep 17, 2025 ಕೋಮು ಗಲಬೆ ನಡೆದಾಗ ಶಾಂತಿ ಕಾಪಾಡುವಂತೆ ಹೇಳುವುದನ್ನು ಬಿಟ್ಟು ಸಮಾಜವನ್ನು ಒಡೆಯುವಂತಹ ಕೆಲಸವನ್ನು ಮಾಡಬಾರದೆಂದು ಶಾಸಕ ಕೆ.ಎಂ.ಉದಯ್ ಅವರು ಹೇಳಿದರು. ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ ಕೆ.ಎಂ.ಉದಯ್ ಅವರು ಮಾತನಾಡಿ, ನಾನು ಯಾವುದೇ ವಿದೇಶ ಪ್ರವಾಸಕ್ಕೆ ಹೋಗಿರಲಿಲ್ಲ. ನನ್ನ ಮಗಳ ಶೈಕ್ಷಣಿಕ ಪ್ರವೇಶಕ್ಕಾಗಿ ವಿದೇಶಕ್ಕೆ ತೆರಳಿದ್ದೆ. ಆ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಅಹಿತಕರ ಘಟನೆ ನಡೆದಿದೆ. ಅದು ನನಗೂ ಬೇಸರ ತಂದಿದೆ. ಆದರೆ ಇದನ್ನು ಪ್ರಚೋದಿಸುವಂತಹ ಕಿಡಿಗೇಡಿಗಳು ಹೆಚ್ಚಾಗಿದ್ದಾರೆ. ಶಾಂತಿ ಕಾಪಾಡಬೇಕಾದವರು ಆಶಾಂತಿಯನ್ನುಂಟು ಮಾಡಿದ್ದಾರೆಂದು ಕಿಡಿಕಾರಿದರು. ಗಣೇಶ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಯಾವತ್ತು ನಡೆಯದ ಘಟನೆ ಆಕಸ್ಮಿಕವಾಗಿ ನಡೆದಿದೆ. ಕಲ್ಲು ಒಡೆದಂತಹ ಕಿಡಿಗೇಡಿಗಳನ್ನು ಯಾವ ಪದಗಳಲ್ಲ