ಜೊಯಿಡಾ: ಉಳವಿ ಶ್ರೀ ಚನ್ನಬಸವೇಶ್ವರ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಕಾರವಾರ ಸಹಾಯಕ ಕಮಿಷನರ್ ಶ್ರವಣಕುಮಾರ ಅಧ್ಯಕ್ಷತೆ ವಹಿಸಿ ಮಾತನಾಡಿ ಫೆಬ್ರುವರಿ 3 ಉಳವಿ ಶ್ರೀ ಚನ್ನಬಸವೇಶ್ವರ ಮಹಾರಥೋತ್ಸವ ನಡೆಯಲಿದೆ. ಎಲ್ಲಾ ಇಲಾಖೆಗಳು ಜಾತ್ರೆಯ ಪೂರ್ವದಲ್ಲಿ ತಮ್ಮ ಪಾಲಿನ ಕೆಲಸ ನಿರ್ವಹಣೆ ಮಾಡುವಂತೆ ಸೂಚಿಸಿದರು.