ಸುಧಾಮೂರ್ತಿ ಜಾತಿಗಣತಿಯಲ್ಲಿ ಭಾಗಿಯಾಗದ ವಿಚಾರಕ್ಕೆ ಸಂಬಂಧಿಸಿ ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಸಚಿವ ಶಿವರಾಜ್ ತಂಗಡಗಿ ಅವರು ಮಾಧ್ಯನಗಳ ಜೊತೆ ಮಾತನಾಡಿ, ನಾನು ಒಂದು ಉದಾಹರಣೆ ಕೊಡ್ತೇನೆ. ಜೋಶಿ, ಸುಧಾಮೂರ್ತಿ ಹೇಳೋದು ನೋಡಿದ್ರೆ. ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಗೊತ್ತಾಗ್ತಿದೆ. ಸುಧಾಮೂರ್ತಿ ಬಗ್ಗೆ ಬಹಳಗೌರವವಿದೆ. ನೀವು ಹಿಂದುಳಿದಿಲ್ಲ ಸರಿ, ಆದರೆ ಮಾಹಿತಿಯನ್ನ ಕೊಡಿ. ಕೊಡಲೇಬೇಕು ಅಂತ ನಾವು ಕೇಳಲ್ಲ. ರಾಜ್ಯಸಭೆ,ಲೋಕಸಭೆ ಸದಸ್ಯರಾಗಿ ಈಗೆ ಹೇಳೋದು ಸರಿಯಲ್ಲ. ಕೇಂದ್ರ ಸರ್ಕಾರ ಜಾತಿಗಣತಿ ಮಾಡುತ್ತೆ. ಆಗಲೂ ಇವರು ಹಾಗೆಯೇ ಹೇಳ್ತಾರಾ? ಅವರು ಒಂದು ನಿರ್ದಿಷ್ಟ ಮಾಹಿತಿ ಕೊಟ್ಟಂತೆ ಕಾಣ್ತಿದೆ. ನಾವು ಅವರ ವೈಯುಕ್ತಿಕ ವಿವರ ಕೇಳ್ತಿಲ್ಲ.