ಸೇಡಂ: ಬಡವರ ಮಕ್ಕಳು ಹ್ಯಾಂಗ್ ಬದುಕಬೇಕ್ರಿ? ಮಳಖೇಡದಲ್ಲಿ ಆತ್ಮಹತ್ಯೆ ಮಾಡಿಕೊಂಡ ಗ್ರಂಥ ಪಾಲಕಿ ತಾಯಿ ಮಲ್ಲಮ್ಮ ಕಣ್ಣಿರು
ಕಲಬುರಗಿ : ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮಳಖೇಡ ಗ್ರಾಮದ ಗ್ರಂಥ ಪಾಲಕಿ ಆತ್ಮಹತ್ಯೆ ಮಾಡಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ, ಕಳೆದ ಹಲವು ತಿಂಗಳಿನಿಂದ ಮಗಳು ಭಾಗ್ಯವಂತಿಗೆ ವೇತನ ಹಾಕಿಲ್ಲ.. ವೇತನ ಇಲ್ಲದೇ ಹೇಗೆ ಜೀವನ ನಡೆಸಬೇಕು.. ಅದಕ್ಕಾಗಿಯೇ ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದಾಳೆಂದು ಮೃತ ಭಾಗ್ಯವಂತಿ ತಾಯಿ ಮಲ್ಲಮ್ಮ ಕಣ್ಣಿರು ಹಾಕಿದ್ದಾರೆ. ಅ13 ರಂದು ಸಂಜೆ 5 ಗಂಟೆಗೆ ಮಳಖೇಡ ಗ್ರಾಮದಲ್ಲಿ ಮಾತನಾಡಿದ ಅವರು, ಮಗಳನ್ನ ಕಳೆದುಕೊಂಡ್ವಿ.. ಮುಂದೆ ಆಕೆಯ ಮಕ್ಕಳ ಪರಿಸ್ಥಿತಿ ಏನು? ನಮಗೆ ಸಹಾಯ ಮಾಡಬೇಕೆಂದು ಮಲ್ಲಮ್ಮ ಮನವಿ ಮಾಡಿದ್ದಾರೆ