ಬೆಂಗಳೂರು ಉತ್ತರ: ಬಿಡದಿ ಟೌನ್ ಶಿಪ್ ವಿರೋಧ ವಿಚಾರ; ಡಿಸಿಗಳ ಜೊತೆ ಚರ್ಚೆ ನಡೆಸಿ ರೈತರ ಭೂಮಿಗೆ ಪರಿಹಾರ: ನಗರದಲ್ಲಿ ಡಿ.ಕೆ ಸುರೇಶ್
ಬಿಡದಿ ಟೌನ್ ಶಿಪ್ ಗೆ ಜೆಡಿ ಎಸ್ ವಿರೋಧ ವಿಚಾರಕ್ಕೆ ಸಂಬಂಧಿಸಿ ಸೋಮವಾರ ಮಧ್ಯಾಹ್ನ 1;30 ರ ಸುಮಾರಿಗೆ ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಂಸದ ಡಿಕೆ ಸುರೇಶ್ ಅವರು, ಬಿಡದಿ ಟೌನ್ ಶಿಪ್ ಗೆ ಭೂಮಿ ಅಕ್ವಿಜಶನ್ ನಡೆಯುತ್ತಿದೆ, ಇದು ನಮ್ಮ ಸರ್ಕಾರದ ಯೋಜನೆ ಅಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಯೋಜನೆ ರೂಪಿಸಿದ್ದು. ಭೂಮಿ ಪರಿವರ್ತನೆ ಸಾಧ್ಯವಾಗಿರಲಿಲ್ಲ. ನಾವು ಟೌನ್ ಶಿಪ್ ಮುಂದುವರೆಸಿದ್ದೇವೆ, ಡಿಸಿಗಳ ಜೊತೆ ಚರ್ಚೆ ಮಾಡಿ ಪರಿಹಾರ ನೀಡುತ್ತಿದ್ದೇವೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ನೀಡುತ್ತಿದ್ದೇವೆ. ಕನಿಷ್ಠ ಒಂದು ಎಕರೆಗೆ ಒಂದುವರೆ ಕೋಟಿ ಸಿಗಲಿದೆ, ಹಣ ತೆಗೆದುಕೊಳ್ಳಿ ಅಂತ ಹೇಳುತ್ತಿಲ್ಲ ರೈತರು ಪಾಲುದಾರಿಕೆ ಇದೆ, ಲ್ಯಾಂಡ್ ಶೇರಿಂಗ್ ಇದರಲ್ಲಿ ಇದೆ.