ಕಿತ್ತೂರು: ಕಿತ್ತೂರು ಉತ್ಸವ ಸಮೀಪಿಸುತ್ತಿದ್ದರೂ ಪೂರ್ವಭಾವಿ ಸಭೆ ಕರೆಯದ ಅಧಿಕಾರಿಗಳ ವಿರುದ್ದ ಸಾರ್ವಜನಿಕರಿಂದ ಕಿತ್ತೂರು ಪಟ್ಟಣದಲ್ಲಿ ಅಸಮಾಧಾನ
ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ಚೆನ್ನಮ್ಮನ ಕಿತ್ತೂರು ಉತ್ಸವ ಸಮೀಪಿಸುತ್ತಿದ್ದರೂ ಅದರ ಪೂರ್ವಭಾವಿ ತಯಾರಿಗಾಗಿ ಜಿಲ್ಲಾಡಳಿತ ಇನ್ನೂವರೆಗೂ ಯಾವುದೇ ಆಸಕ್ತಿ ತೋರದೇ ಇರುವುದು ಜನರಲ್ಲಿ ಬೇಸರ ಮೂಡಿಸಿದೆ ಕಳೆದ ಬಾರಿ ಎರಡು ತಿಂಗಳಿಗೂ ಮೊದಲೇ ಪೂರ್ವಭಾವಿ ಸಭೆ ಕರೆದು ಉತ್ಸವದ ಕುರಿತು ತಯಾರಿ ಪ್ರಾರಂಭಿಸಿತ್ತು.ಆದರೆ ಈಗ ಇನ್ನು ಕೇವಲ 22 ದಿನಗಳು ಮಾತ್ರ ಉಳಿದಿದ್ದರೂ ಇವತ್ತಿನವರೆಗೆ ಯಾವುದೇ ಪೂರ್ವಭಾವಿ ಸಭೆ ನಡೆಸಿಲ್ಲ ಕೋಟೆ ಆವರಣದಲ್ಲಿ ಗಿಡಗಂಟೆಗಳು ಬೆಳೆದು ನಿಂತಿವೆ ಪ್ರತಿ ವರ್ಷ ಉತ್ಸವಕ್ಕೂ ಮೊದಲು ರಾಣಿ ಚೆನ್ನಮ್ಮನ ಜ್ಯೋತಿ ಜಿಲ್ಲಾಧ್ಯಂತ ಸಂಚರಿಸಿ ಕಿತ್ತೂರಿಗೆ ಆಗಮಿಸುತ್ತಿತ್ತು ಆದರೆ ಆ ಕಾರ್ಯಕ್ರಮ ಕಾಣಿಸುತ್ತಲೇ ಇಲ್ಲ ಎಂದು ಬುಧುವಾರ 4 ಗಂಟೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.