ಜಮಖಂಡಿ: ಶಾಸಕ ಜಗದೀಶ್ ಗುಡಗುಂಟಿ ಕ್ಷಮೆ ಯಾಚಿಸದಿದ್ದರೆ ಉಗ್ರ ಹೋರಾಟ,ನಗರದಲ್ಲಿ ವಾಲ್ಮೀಕಿ ಮಹಾಸಭಾದ ಮುಖಂಡ ಪ್ರಕಾಶ
ಮಹರ್ಷಿ ವಾಲ್ಮೀಕಿ ಅವರ ಬಗ್ಗೆ ಹಗುರವಾಗಿ ಮಾತನಾಡಿದ ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ಅವರು ಸಮಾಜದ ಕ್ಷಮೆಯಾಚಿಸಬೇಕು,ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಮುಖಂಡ ಪ್ರಕಾಶ ನಾಯ್ಕರ್ ಎಚ್ಚರಿಕೆ ನೀಡಿದ್ದಾರೆ. ಬಾಗಲಕೋಟೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು,ಕಳೆದ ಕೆಲವು ದಿನಗಳ ಹಿಂದೆ ಜಮಖಂಡಿಯಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ವೇಳೆ ಶಾಸಕ ಜಗದೀಶ ಗುಡಗುಂಟಿ ವಾಲ್ಮೀಕಿ ಮಹರ್ಷಿ ಮಾಡಬಾರದ ಕೆಲಸಮಾಡುತ್ತಿದ್ದರೆಂದು ಅವಹೇಳನ ಮಾಡಿದ್ದಾರೆ.ಹೀಗಾಗಿ ಅವರು ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಮನೆಗೆ ಮುತ್ತಿಗೆ ಹಾಕಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.