ಮಾಲೂರು: ಪಶ್ಚಿಮ ಬಂಗಾಳದ ಯುವಕನ ಕೊಲೆ
: ಸೀತಪ್ಪನಹಳ್ಳಿ ಬಳಿ ಘಟನೆ
Malur, Kolar | Sep 18, 2025 ಕೋಲಾರದಲ್ಲಿ ಪಶ್ಚಿಮ ಬಂಗಾಳದ ಯುವಕನ ಕೊಲೆ ಕೋಲಾರ: ಜಿಲ್ಲೆಯ ಮಾಲೂರು ತಾಲೂಕಿನ ಸೀತಪ್ಪನಹಳ್ಳಿ ಬಳಿ ಪಶ್ಚಿಮ ಬಂಗಾಳ ಮೂಲದ ಯುವಕನೊಬ್ಬನ ಕೊಲೆ ನಡೆದಿದೆ. ಅರ್ನಬ್ (25) ಎಂದು ಗುರುತಿಸಲಾದ ಈ ಯುವಕ, ತಡರಾತ್ರಿ ನಡೆದ ಭೀಕರ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ. ಚಿಕಿತ್ಸೆ ಫಲಕಾರಿಯಾಗದೆ ಕೋಲಾರ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮೃತನಾದ ಅರ್ನಬ್ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಮಾಲೂರು ಪೊಲೀಸ್