ಚಳ್ಳಕೆರೆ: ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ, ಮತದಾರರ ಗೊಂದಲ ಪರಿಹರಿಸಿದ ತಹಶೀಲ್ದಾರ್
ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ಹಿನ್ನೆಲೆ ಚಳ್ಳಕೆರೆಯ ಹೆಚ್ಪಿಪಿಸಿ ಸರ್ಕಾರಿ ಕಾಲೇಜಿನಲ್ಲಿ ಬಿರುಸಿನ ಮತದಾನ. ಪಟ್ಟಿಯಲ್ಲಿ ಹೆಸರಿಲ್ಲದೆ ಗೊಂದಲಕ್ಕೀಡಾದ ಮತದಾರರಿಗೆ ತಹಶೀಲ್ದಾರ್ ರೇಹಾನ್ ಪಾಷ ಅವರು ಸ್ಥಳದಲ್ಲೇ ಪರಿಶೀಲನೆ ನಡೆಸಿ ಹೊಸ ಕ್ರಮಸಂಖ್ಯೆ ಒದಗಿಸಿದರು.