ಕೃಷ್ಣರಾಜಪೇಟೆ: ವಸತಿ ಶಾಲಾ ಆವರಣದಲ್ಲಿ ಜೋಡಿ ಹಾವುಗಳನ್ನು ಕಂಡು ಆತಂಕ, ಕೆ ಆರ್ ಪೇಟೆ ತಾಲ್ಲೂಕು ಶೆಟ್ಟಿ ನಾಯಕನಕೊಪ್ಪಲು ಗ್ರಾಮದಲ್ಲಿ ಘಟನೆ
ಕೆ ಆರ್ ಪೇಟೆ : ತಾಲ್ಲೂಕಿನ ಶೆಟ್ಟಿನಾಯಕನಕೊಪ್ಪಲು ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಆವರಣದಲ್ಲಿರುವ ಹುತ್ತದಲ್ಲಿ ಜೋಡಿ ಹಾವುಗಳ ಕಾಣಿಸಿಕೊಂಡು ಶಿಕ್ಷಕರು ಮಕ್ಕಳಲ್ಲಿ ಆತಂಕ ಸೃಷ್ಟಿಸಿದ್ದ ಪ್ರಸಂಗ ವರದಿ ಯಾಗಿದೆ . ಶಾಲೆಯ ಕಾಂಪೌಂಡ್ ಬಳಿಯ ಹುತ್ತದಲ್ಲಿ ಮಂಗಳವಾರ ಮಧ್ಯಾಹ್ನ 12.30ರ ಸಮಯದಲ್ಲಿ ಹಾವುಗಳನ್ನು ಕಂಡ ಪ್ರಾಂಶುಪಾಲೆ ಪವಿತ್ರ ಅವರು ಮಕ್ಕಳು ಶಿಕ್ಷಕರನ್ನು ಎಚ್ಚರಿಸಿ ಬಿಇಒ ತಿಮ್ಮನಗೌಡ ರವರಿಗೆ ವಿಷಯ ತಿಳಿದ ಮೇರೆಗೆ ಅವರ ಕೋರಿಕೆ ಮೇರೆಗೆ ಸ್ಥಳಕ್ಕೆ ಆಗಮಿಸಿದ ಹಾವು ಸಂರಕ್ಷಕರಾದ ಮಂಜೇಗೌಡರು ರಂಗಸ್ವಾಮಿ ಅವರುಗಳು ಕಾಂಪೌಂಡ್ ಗೆ ಹೊಂದಿಕೊಂಡಂತಿದ್ದ ಹುತ್ತ ಬಗೆಯುವುದು ಕಷ್ಟ ಸಾಧ್ಯವಾದ್ದ ರಿಂದ ಹುತ್ತಕ್ಕರ ನೀರು ತುಂಬಿಸಿ 2 ಕೆರೆ ಹಾವುಗಳನ್ನು ಹಿಡಿಯಲಾಯಿತು.