ಬೆಂಗಳೂರು ಉತ್ತರ: ಅರ್.ಎಸ್ಎಸ್ ಪರ ಮಾತಾಡದಿದ್ರೆ ಬಿಜೆಪಿ ನಾಯಕರಿಗೆ ಟಿಕೇಟ್ ಇಲ್ಲ: ನಗರದಲ್ಲಿ ಪ್ರಿಯಾಂಕ ಖರ್ಗೆ
ಬಿಜೆಪಿಯವ್ರು ಆರ್‌ಎಸ್‌ಎಸ್ ನ ಗುಲಾಮರು, ಒಂದು ತಿಂಗಳಿಂದ ಪಥ ಸಂಚಲನ ಜಟಾಪಟಿ ನಡೀತಿದೆ ಎಂದು ಬಿಜೆಪಿ ವಿರುದ್ದ ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ರೇಸ್ ಕೋರ್ಸ್ ಬಳಿ ಸಚಿವ ಪ್ರಿಯಾಂಕ ಖರ್ಗೆ ಹರಿಹಾಯ್ದರು. ಒಂದು ತಿಂಗಳ ನಂತರ ನಿನ್ನೆ ಅದರ ಮುಖ್ಯಸ್ಥರು ಮಾತಾಡಿದ್ದಾರೆ. ಆದ್ರೆ ಬಿಜೆಪಿಯವ್ರು ಒಂದು ತಿಂಗಳಿಂದ ಬೀದಿಯಲ್ಲಿ ಮಾತಾಡ್ತಿದ್ದಾರೆ. ಆರ್‌ಎಸ್‌ಎಸ್ ಪರ ಮಾತಾಡದಿದ್ರೆ ಬಿಜೆಪಿ ನಾಯಕರಿಗೆ ಟಿಕೆಟ್ ಸಿಗಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ನೇಮಕ ಇನ್ನೂ ಆಗಿಲ್ಲ ಯಾಕೆ? ಯಾಕೆಂದರೆ ಆರ್‌ಎಸ್‌ಎಸ್ ಅನುಮತಿ ಕೊಟ್ಟಿಲ್ಲ ಎಂದರು.