ಬಿಜೆಪಿಯವರು ವಿರೋಧ ಪಕ್ಷದ ನಾಯಕನನ್ನು ಆದಷ್ಟು ಬೇಗ ಚೈಂಜ್ ಮಾಡಿದ್ರೆ ಒಳ್ಳೆಯದು, ಇಲ್ಲ ನೀವು ಶಾಶ್ವತವಾಗಿ ವಿಪಕ್ಷದಲ್ಲಿ ಕೂರೋದು ಗ್ಯಾರಂಟಿ ಎಂದು ಅರಮನೆ ಮೈದಾನದಲ್ಲಿ ಸಚಿವ ಎಂ ಬಿ ಪಾಟೀಲ್ ಅವರು ಮಾಧ್ಯಮಗಳ ಜೊತೆ ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಾತನಾಡಿದರು. 63 ಪರ್ಸೆಂಟ್ ಭ್ರಷ್ಟಾಚಾರ ಎಂಬ ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಉಪ ಲೋಕಯುಕ್ತರು ಹೇಳಿದ್ದು 2019 ಆಗಸ್ಟ್ ನಲ್ಲಿ, ಅಶೋಕ್ ರಂತವರನ್ನು ವಿರೋಧ ಪಕ್ಷದವರಾಗಿ ಇಟ್ಟುಕೊಂಡ್ರೆ, ಸೂರ್ಯ ಚಂದ್ರ ಇರೋ ತನಕ ಕೂಡ ಬಿಜೆಪಿ ವಿರೋಧ ಪಕ್ಷವಾಗಿಯೇ ಉಳಿಯುತ್ತದೆ. ಅವರಿಗೆ ಯಾವ ವರ್ಷದಲ್ಲಿ ಮಾತಾಡಿದ್ದು ಎಂಬುದು ಗೊತ್ತಿಲ್ಲ. ಇಷ್ಟು ಅಜ್ಞಾನದಿಂದ, ಬೇಜವಬ್ದಾರಿಯುತವಾಗಿ ಇದ್ದಾರೆ ಎಂದರು.