ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಹಲವು ಕೆರೆಗಳಿಗೆ ವೃಷಭಾವತಿ ನೀರು ಹರಿಸಲು ರಾಜ್ಯ ಸರ್ಕಾರ ಮುಂದಾಗಿದ್ದು ಇದಕ್ಕೆ ಸ್ಥಳೀಯರು ಸೇರಿದಂತೆ ಹಲವು ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿರುವ ಬೆನ್ನಲ್ಲೇ ನೆಲಮಂಗಲ ವಿಧಾನಸಭಾ ಕ್ಷೇತ್ರದ ಶಾಸಕ ಎನ್ ಶ್ರೀನಿವಾಸ್ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ತಮಗೆ ಯಾವುದೇ ಕಾರಣಕ್ಕೂ ವೃಷಭಾವತಿ ನೀರು ಎರಡು ಹಂತದಲ್ಲಿ ಶುದ್ಧೀಕರಣವಾದರೆ ಬೇಡ ಮೂರು ಹಂತದಲ್ಲಿ ಶುದ್ಧೀಕರಿಸಿದರೆ ಮಾತ್ರ ನಮ್ಮ ತಾಲೂಕಿನ ಕೆರೆಗಳಿಗೆ ಹರಿಸಿ ಇಲ್ಲದೆ ಹೋದಲ್ಲಿ ಎತ್ತಿನಹೊಳೆ ನೀರನ್ನು ಹರಿಸಬೇಕು ಎಂದು ಅಧಿವೇಶನದಲ್ಲಿ ಪ್ರಸ್ತಾಪಿಸಿದರು