ಬೆಂಗಳೂರು ಉತ್ತರ: ಪಕ್ಷದಲ್ಲಿ ಎಲ್ಲವೂ ತಿಳಿಯಾಗಿದೆ, ಸಂತೋಷದ ವಾತಾವರಣವಿದೆ: ನಗರದಲ್ಲಿ ಸಚಿವ ಪರಮೇಶ್ವರ್
ಡಿಸಿಎಂ ಮನೆಯಲ್ಲಿ ಸಿಎಂ ಬ್ರೇಕ್ ಫಾಸ್ಟ್ ವಿಚಾರಕ್ಕೆ ಸಂಬಂಧಿಸಿ ಗೃಹಸಚಿವ ಜಿ.ಪರಮೇಶ್ವರ್ ಅವರು ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಪಕ್ಷದಲ್ಲಿ ಎಲ್ಲವೂ ತಿಳಿಯಾಗಿದೆ. ಈಗ ಸಂತೋಷದ ವಾತಾವರಣವಿದೆ. ಸಿಎಂ ಡಿಸಿಎಂ ಎರಡನೇ ಬ್ರೇಕ್ ಫಾಸ್ಟ್ಗೆ ನನ್ನ ಕರೆದಿಲ್ಲ. ಡಿಸಿಎಂ,ಸಿಎಂ ನನ್ನ ಕರೆದಿದ್ದರೆ ಹೋಗ್ತಿದ್ದೆ. ಅಗತ್ಯ ಬಿದ್ರೇ ನಮ್ಮ ಮನೆಗೂ ಬ್ರೇಕ್ ಫಾಸ್ಟ್ ಗೆ ಕರೆಯುತ್ತೇನೆ ಎಂದರು.