ಮದ್ದೂರು: ವಿರೋಧ ಪಕ್ಷದವರು ಮಾಡಲು ಕೆಲಸವಿಲ್ಲದೆ ನವೆಂಬರ್ ನಲ್ಲಿ ಕ್ರಾಂತಿ ಕ್ಯಾತೆ ತೆಗೆದಿದ್ದಾರೆ: ಮದ್ದೂರಿನಲ್ಲಿ ಶಾಸಕ ಕದಲೂರು ಉದಯ್
Maddur, Mandya | Oct 7, 2025 ರಾಜ್ಯದಲ್ಲಿ ಯಾವುದೇ ರಾಜಕೀಯ ಕ್ರಾಂತಿ ಆಗಲ್ಲ. ವಿರೋಧ ಪಕ್ಷದವರು ಮಾಡಲು ಕೆಲಸವಿಲ್ಲದೆ ನವೆಂಬರ್ ನಲ್ಲಿ ಕ್ರಾಂತಿ ಕ್ಯಾತೆ ತೆಗೆದಿದ್ದಾರೆ ಎಂದು ಶಾಸಕ ಕದಲೂರು ಉದಯ್ ಟೀಕಿಸಿದರು. ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಕೆಶಿ ಸಿಎಂ ಆಗಬೇಕು ಅನ್ನೋದು ನನ್ನ ಆಸೆ ಹಾಗೆಯೇ ಮುಂದೆ ಸಿಎಂ ಆಗ್ತಾರೆ ಎಂದು ಡಿಕೆಶಿ ಪರ ಬ್ಯಾಟ್ ಬೀಸಿದರು. ಸಿದ್ದರಾಮಯ್ಯ ಅವರು 2 ವರ್ಷದಿಂದ ಉತ್ತಮವಾಗಿ ಅಧಿಕಾರ ನಡೆಸುವ ಮೂಲಕ ರಾಜ್ಯದ ಪ್ರತಿ ವರ್ಗಕ್ಕೂ ಅನುಕೂಲ ಕಲ್ಪಿಸಿದ್ದಾರೆ. ಇವರನ್ನು ಬದಲಾವಣೆ ಮಾಡಿ ಎಂದು ಯಾರು ಹೇಳಿಲ್ಲ. ವಿರೋಧ ಪಕ್ಷದವರು ಮಾಡಲು ಕೆಲಸವಿಲ್ಲದೆ ನವೆಂಬರ್ ನಲ್ಲಿ ರಾಜಕೀಯ ಕ್ರಾಂತಿಯಾಗುತ್ತದೆ ಎಂದರು.