ಮದ್ದೂರು: ಭಾರತೀನಗರದ ಗ್ರಾ.ಪಂ ವತಿಯಿಂದ ಸ್ವಚ್ಚತಾ ಹೀ- ಸೇವಾ ಕಾರ್ಯಕ್ರಮದ ತಾಪಂ ಇಓ ರಾಮಲಿಂಗಯ್ಯ ಚಾಲನೆ
Maddur, Mandya | Sep 20, 2025 ಮದ್ದೂರು ತಾಲ್ಲೂಕು ಭಾರತೀನಗರದ ಗ್ರಾ.ಪಂ ವತಿಯಿಂದ ಸೆ.17 ರಿಂದ ಅಕ್ಟೋಬರ್ 2 ವರೆಗೆ ಹಮ್ಮಿಕೊಂಡಿರುವ ಸ್ವಚ್ಚತಾ ಹೀ- ಸೇವಾ ಕಾರ್ಯಕ್ರಮದ ಅಂಗವಾಗಿ ನಡೆದ ಭಾರತೀನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಚ್ಚತಾ ಕಾರ್ಯಕ್ರಮಕ್ಕೆ ತಾ.ಪಂ ಇಓ ರಾಮಲಿಂಗಯ್ಯ ಚಾಲನೆ ನೀಡಿದರು. ನಂತರ ರಾಮಲಿಂಗಯ್ಯ ಅವರು ಮಾತನಾಡಿ, ಗ್ರಾಮ ಸ್ವಚ್ಚತೆ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿರುವುದರಿಂದ ಜನಸಮುದಾಯದಲ್ಲಿ ಸ್ವಚ್ಚತೆಯ ಆಶಯಗಳನ್ನು ಬಲ ಪಡಿಸಲು ಸ್ವಚ್ಚತೋತ್ಸವ ಪಾಕ್ಷಿಕ ಅಭಿಯಾನವನ್ನು ತಾಲ್ಲೂಕಿನಾಧ್ಯಂತ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಈ ಸ್ವಚ್ಚತಾ ಕಾರ್ಯಕ್ರಮದ ಅಂಗವಾಗಿ ಗ್ರಾಮಗಳನ್ನು, ಧಾರ್ಮಿಕ ಸ್ಥಳಗಳನ್ನು, ಶಾಲಾ-ಕಾಲೇಜಿನ ಆವರಣ, ಕೆರೆಕಟ್ಟೆ