ಮಾಲೂರು: ಟೇಕಲ್ ಬಳಿ ರಸ್ತೆಯನ್ನು ಸುಗಮಗೊಳಿಸಿ ಸಾರ್ವಜನಿಕರಿಗೆ ಪರಿಹಾರ ಕಲ್ಪಿಸಿದ ಶಾಸಕ ಕೆ.ವೈ.ನಂಜೇಗೌಡ
Malur, Kolar | Nov 17, 2025 ರಸ್ತೆಯನ್ನು ಸುಗಮಗೊಳಿಸಿ ಸಾರ್ವಜನಿಕರಿಗೆ ಪರಿಹಾರ ಕಲ್ಪಿಸಿದ ಶಾಸಕ ಕೆ.ವೈ.ನಂಜೇಗೌಡ ಮಾಲೂರು : ಟೇಕಲ್ ರೈಲ್ವೆ ಬ್ರಿಡ್ಜ್ ಕೆಳಭಾಗದ ರಸ್ತೆ ತೆರವುಗೊಳ್ಳಲು ಯಲುವಗುಳಿ ಗ್ರಾಮದ ಹಾಗೂ ಕೆ.ಜಿ.ಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಸತೀಶರಾಜಣ್ಣ ಹಾಗೂ ಗ್ರಾಮಸ್ಥರು ಇಂದು ಶಾಸಕರಿಗೆ ಮನವಿ ಮಾಡಿದ್ದರ ಹಿನ್ನಲೆಯಲ್ಲಿ ಶಾಸಕ ಕೆ.ವೈ.ನಂಜೇಗೌಡರು ಖುದ್ದು ಸ್ಥಳಕ್ಕೆ ಬೇಟಿ ನೀಡಿ ಅದನ್ನು ತೆರವುಗೊಳಿಸಿ ಸುಗಮಗೊಳಿಸಿದ ಘಟನೆ ಸೋಮವಾರ ನಡೆದಿದೆ. ನೂತನ ಟೇಕಲ್ ರೈಲ್ವೆ ಬ್ರಿಡ್ಜ್ನ ಕೆಳಗಿನ ರಸ್ತೆಗೆ ಪರ್ಯಾಯವಾಗಿ ಬ್ರಿಡ್ಜ್ ಪಕ್ಕದಲ್ಲೆ ಬೇರೊಂದು ರಸ್ತೆಯನ್ನು ನಿರ್ಮಾಣ ಮಾಡಲಾಗಿದ್ದು ಸಾರ್ವಜನಿಕರಿಗೆ ಅದನ್ನು ಬಳಸಲು ತಿಳಿಸಲಾಗಿತ್ತು. ಆದರೆ ಅದು ತಿರುವು ರಸ್ತೆಯಾಗಿ