ಕುರುಗೋಡು ಪಟ್ಟಣದ ಬಳ್ಳಾರಿ ರಸ್ತೆಯ ನೀರಾವರಿ ಎಲ್‌ಎಲ್‌ಸಿ ಕಾಲೋನಿಯಲ್ಲಿ “ಬಿಹಾರ ಮೂಲದ ರೇಪಿಸ್ಟ್ ಗ್ಯಾಂಗ್‌ಗಳು ಪ್ರತ್ಯಕ್ಷವಾಗಿವೆ” ಎಂಬ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರಿಂದ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ. ಈ ವದಂತಿಗಳ ನಡುವೆಯೇ, ಕುರುಗೋಡಿನ ಮನೆಯೊಂದಕ್ಕೆ ತೆರಳಿದ್ದ ವ್ಯಕ್ತಿಯೊಬ್ಬನ ಮೇಲೆ ಅನುಮಾನ ವ್ಯಕ್ತಪಡಿಸಿದ ಸ್ಥಳೀಯರು ಆತನಿಗೆ ಧರ್ಮದೇಟು ನೀಡಿದ ಘಟನೆ ನಡೆದಿದೆ. ನಂತರ ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಆ ವ್ಯಕ್ತಿಯನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಈ ಘಟನೆ ಕುರಿತು ಡಿ.16 ಮಂಗಳವಾರ ಮಧ್ಯಾಹ್ನ 12 ಗಂ